Bumblefoot treatment: ಕೋಳಿ ಕಾಲಿನ ಆಣಿ ಸಮಸ್ಯೆಗೆ ಪರಿಹಾರ
ಕೋಳಿ ಕಾಲಿನ ಆಣಿಗೆ ಇಲ್ಲಿದೆ ಪರಿಹಾರ, ನಾಟಿ ಕೋಳಿ, ಫೈಟರ್ ಕೋಳಿ ಅಥವಾ ಇನ್ನಾವುದೇ ಕೋಳಿಗೆ ಕಾಡೋ ಗಂಭೀರ ಸಮಸ್ಯೆ ಈ ಆಣಿ (Bumblefoot) ಸಮಸ್ಯೆ, ಬನ್ನಿ ಈ ಲೇಖನದಲ್ಲಿ ಕೋಳಿ ಕಾಲಿನ ಆಣಿಗೆ ಯಾವ ರೀತಿ ಚಿಕಿತ್ಸೆ ನೀಡಬಹುದು ನೋಡೋಣ.

ಕೋಳಿಗೆ ಕಾಡೋ ಗಂಭೀರ ಸಮಸ್ಯೆ ಈ ಆಣಿ ಸಮಸ್ಯೆ, ಅದರ ಪರಿಹಾರ/ಚಿಕಿತ್ಸೆ
ನಮ್ಮ ಹಲವಾರು ಸದಸ್ಯರು ಹಾಗೂ ಕೋಳಿ ಸಾಕಾಣಿಕೆದಾರರು ಈ ಬಗ್ಗೆ ಪರಿಹಾರಕ್ಕೆ ಎದುರು ನೋಡುತ್ತಿದ್ದಾರೆ, ಆದ್ದರಿಂದ ಒಂದು ಉತ್ತಮ ಪರಿಹಾರ ವಿಧಾನವನ್ನು ಇಂದು ಹಂಚಿಕೊಳ್ಳುತ್ತಿದ್ದೇನೆ.
ಕೋಳಿಗಳಲ್ಲಿ ಬಂಬಲ್ಫೂಟ್ (Bumblefoot easy Treatment)
ಸಮಸ್ಯೆಯನ್ನು ಸರಿಯಾಗಿ ಗುರುತಿಸುವುದು ಚಿಕಿತ್ಸೆಯ ನಿರ್ಣಾಯಕ ಭಾಗವಾಗಿದೆ. ಹಾಗೂ ನಿಮ್ಮ ಕೋಳಿಗೆ ಕಾಲು ನೋವಿನ ಮೂಲವಾಗಿ ಬಂಬಲ್ಫೂಟ್ ಅನ್ನು ಸೂಚಿಸುವ ಕೆಲವು ಆರಂಭಿಕ ಲಕ್ಷಣಗಳು ಇಲ್ಲಿವೆ:
- ಪಾದದ ಕೆಳಭಾಗದಲ್ಲಿ ಗಾಯ ಅಥವಾ ಸವೆತ
- ಉಗುರು/ಕಾಲ್ಬೆರಳ ಉಗುರಿನ ಕೆಳಗೆ ಊತ
- ಕಾಲ್ಬೆರಳುಗಳ ನಡುವೆ ಒರಟು, ಕೆಂಪು ಚರ್ಮ
- ಕಾಲು ಅಥವಾ ಬಾಧಿತ ಪ್ರದೇಶದ ಊತ
ಕೋಳಿಯ ಕಾಲಿಗೆ ಆಗುವ ಆಣಿ ಸಮಸ್ಯೆಗೆ ಕಾರಣಗಳು ? ( Bumblefoot in Chickens)
- ವಂಶ ಪಾರಂಪರ್ಯವಾಗಿ
- ಕೋಳಿ ಅತಿತೂಕ ಆದಾಗ ನೆಲದಲ್ಲಿ ಕೆರೆದಾಗ ಚಿಕ್ಕ ಕಲ್ಲು ಅಥವಾ ಚೂಪಾದ ಪದಾರ್ಥ ಬಡಿದಾಗ. ಆ ಚೂಪಾದ ಚಿಕ್ಕ ಕಲ್ಲು ತಗುಲಿ ಚಿಕ್ಕ ತರಿಚಿ ನಂತರ ಅದು ನೀರಲ್ಲಿ ಒದ್ದೆಯಾಗಿ ಕ್ರಮೇಣ ಹೆಚ್ಚಾಗುತ್ತದೆ.
- ಕೋಳಿಗಳು ಎಲ್ಲಿಂದಾದರೂ ಜಿಗಿದಾಗ
- ಗಲೀಜು ಮತ್ತು ಮಲದಿಂದ
- ಬ್ಯಾಕ್ಟೀರಿಯಾ ಸೋಂಕಿನಿಂದ
ಕೋಳಿ ಆಣಿಗೆ ಪರಿಹಾರ ಅಥವಾ ಆರೈಕೆ ಹೇಗೆ ?

👉 ಮೆಡಿಸನ್ ?
1) Antimonium Crudum 200 ( oral drops )
2) Hydrastis ( ointment )
👉 ವಿಧಾನ :
ಬಂಬಲ್ಫೂಟ್ ಅನ್ನು ಸುಲಭವಾಗಿ ತಡೆಯಬಹುದು, ಆದರೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ.
ಮೊದಲು ಕೋಳಿ ಕಾಲಿಗೆ ಆಗಿರುವ ಆಣಿ ಜಾಗವನ್ನು ಸ್ವಚ್ಛ ಮಾಡಬೇಕು, ಸ್ವಚ್ಛಮಾಡಲು ಸ್ವಲ್ಪ ಡೆಟಾಯಿಲ್ ಬಳಸಬಹುದು. ಆಣಿಯ ಜಾಗವನ್ನು ಸ್ವಚ್ಛ ಮಾಡಿದ ಮೇಲೆ Hydrastis ( ointment ) ಹಚ್ಚಿ ಅದರ ಮೇಲೆ ಸ್ವಲ್ಪ ಹತ್ತಿ ಇಟ್ಟು, ಕಾಟನ್ ಬಟ್ಟೆ ಸಹಾಯದಿಂದ ಕಟ್ಟು ಕಟ್ಟಬೇಕು..
Note : ಎರಡು ದಿನಕ್ಕೆ ಒಮ್ಮೆ ಇದನ್ನು ಪುನರಾವರ್ತಿಸಬೇಕು. ಒಟ್ಟಾರೆ ಹದಿನೈದು ದಿನಗಳ ಕಾಲ.
ಈ ಕ್ರಮದಿಂದ ಆಗಿರುವ ಆಣಿ, ಕ್ರಮೇಣ ಬಿಗಿಯಾದ ಭಾಗ ಉದುರುತ್ತದೆ, ಆ ಜಾಗದಲ್ಲಿ ಮತ್ತೆ Hydrastis ( ointment ) ಹಚ್ಚಿ ಕಟ್ಟು ಕಟ್ಟ ಬೇಕು… ಈ ಬಾರಿಯ ಕಟ್ಟು ಆ ಗಾಯ ವಾಸಿ ಆಗಲು.
ಚಿಕಿತ್ಸೆಯ ದಿನಗಳಲ್ಲಿ ಕೋಳಿ ಯಾವುದೇ ಕಾರಣಕ್ಕೆ ಒದ್ದೆಗೆ ಹೋಗಬಾರದು. ಗಾಯದ ಮೇಲೆ ನೀರು ಬೀಳ ಬಾರದು. ಕಟ್ಟಿರುವ ಬಟ್ಟೆಯ ಒಳಗೆ ಮಣ್ಣು ದೂಳು ಮರಳು ಸೇರಬಾರದು.
👉 ಇನ್ನು ಚಿಕಿತ್ಸೆಯ 15 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಕೋಳಿಗೆ Antimonium Crudum 200 ( oral drops ) ನೇರವಾಗಿ ಐದೈದು ಡ್ರಾಪ್ಸ್ ಕುಡಿಸಬೇಕು.
ಇದನ್ನೂ ಓದಿ : ನಾಟಿ ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಇಳಿಕೆ: ಕಾರಣಗಳು ಮತ್ತು ಪರಿಹಾರಗಳು
ಇದರ ಪರ್ಯಾಯವಾಗಿ ಹೊರಭಾಗವನ್ನು ಮೃದುಗೊಳಿಸಲು ಎಪ್ಸಮ್ ಉಪ್ಪು ಹಾಗು ಬೆಚ್ಚಗಿನ ನೀರಿನಲ್ಲಿ ಗಾಯವನ್ನು ತೊಳೆಯಿರಿ. ಕೀವು ಮತ್ತು ಇನ್ನಿತರ ತೆರವುಗೊಳಿಸಿದ ನಂತರ ಅದಕ್ಕೆ ಪ್ರತಿಜೀವಕ ಮುಲಾಮುಗಳನ್ನು ಹಚ್ಚಿ.
ನೆನಪಿಡಿ, ತೂಕ, ಆಹಾರ ಮತ್ತು ಪರಿಸರದಂತಹ ಎಲ್ಲವೂ ಬಂಬಲ್ಫೂಟ್ ತಡೆಗಟ್ಟುವಲ್ಲಿ ಪಾತ್ರವಹಿಸುತ್ತವೆ. ಮಲದ ಅವಶೇಷಗಳಿಂದ ಪ್ರದೇಶವು ಸ್ವಚ್ಛವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕೋಳಿಯ ಬುಟ್ಟಿಯನ್ನು ಪರೀಕ್ಷಿಸಿ ಮತ್ತು ನೆಲದಿಂದ ಬುಟ್ಟಿ ತುಂಬಾ ಎತ್ತರ ಇರಿಸಬೇಡಿ.
ಕೊಳಕು ಕೋಳಿಯ ಬುಟ್ಟಿಯಲ್ಲಿ ಬೆಳೆಯುವ ಬ್ಯಾಕ್ಟೀರಿಯಾ. ನಿಮ್ಮ ಕೋಳಿಯ ಆರೋಗ್ಯದ ಮೇಲೆ ಈ ರೀತಿಯ ಪರಿಣಾಮ ಬೀರುತ್ತದೆ.
ಸೂಚನೆ : ಸ್ನೇಹಿತರೆ ನಾನು ಇಲ್ಲಿ ನನ್ನ ಸ್ವಂತ ಅನುಭವವನ್ನು ನಿಮ್ಮಲ್ಲಿ ಹಂಚಿಕೊಂಡಿದ್ದೇನೆ, ಹೊರತು ನಾನಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ನಾನು ಅನುಸರಿಸಿ ಉತ್ತಮ ಫಲಿತಾಂಶ ಕಂಡ ವಿಷಯಗಳನ್ನು ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.
📱 ಕೋಳಿಗೂಡು ವೆಬ್ ನ ಎಲ್ಲಾ ಲೇಖನಗಳ ಅಲರ್ಟ್ಸ್ ಪಡೆಯಲು | Facebook | Twitter | Instagram | Youtube ಅನುಸರಿಸಿ.📣 ಎಲ್ಲಾ ನವೀಕರಣಗಳು ಈಗ Koligudu App ನಲ್ಲಿ.