ನಾಟಿ ಕೋಳಿಯ ಫೌಲ್ ಪಾಕ್ಸ್ ರೋಗಕ್ಕೆ ಚಿಕಿತ್ಸೆ, ಪರಿಹಾರ, FowlPox ರೋಗಕ್ಕೆ ಆಯುರ್ವೇದಿಕ್ ಔಷಧಿ

Nati Koli Fowl pox ರೋಗಕ್ಕೆ ಆಯುರ್ವೇದಿಕ್ ಔಷಧಿ, ನಾಟಿ ಕೋಳಿಗೆ ಬರುವ ಫೌಲ್ ಪಾಕ್ಸ್ ಸಾಂಕ್ರಾಮಿಕ ವೈರಲ್ ಸೋಂಕಾಗಿದ್ದು, ಕೋಳಿಯ ಚರ್ಮದ ಮೇಲೆ ನೋವು ಕೊಡೋ ಹುಣ್ಣುಗಳನ್ನ ಸೃಷ್ಟಿ ಮಾಡುತ್ತೆ.

🐔 ಕೋಳಿಗೂಡು (Koligudu) :

Nati Koli Fowlpox ರೋಗಕ್ಕೆ ಆಯುರ್ವೇದಿಕ್ ಔಷಧಿ

ಅಮ್ಮ ಅಂತ ಕರೆಯೋ ಈ Fowlpox ಸಮಸ್ಯೆ ಕೋಳಿಗಳನ್ನ ತುಂಬಾನೇ ಬಾಧಿಸುತ್ತೆ, ಡ್ರೈ ಫೌಲ್ ಪಾಕ್ಸ್ ಹಾಗೂ ವೆಟ್ ಫೌಲ್ ಪಾಕ್ಸ್ ಅನ್ನೋ ಎರಡು ವಿಧ ಇದೆ, ಒಂದು ವೇಳೆ ವೆಟ್ ಫೌಲ್ ಪಾಕ್ಸ್ ಕಾಣಿಸಿಕೊಂಡರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತೆ.

ಒಣ ಗಾಯಗಳು ಮತ್ತು ಹಸಿ ಗಾಯಗಳು ಅಂತ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಟ್ಟರೆ ಸಮಸ್ಯೆಯನ್ನ ಹತೋಟಿಯಲ್ಲಿ ಇಡೋದಲ್ದೆ ಪೂರ್ಣವಾಗಿ ವಾಸಿ ಮಾಡಬಹುದು.

Nati Koli FowlPox Treatment in Kannada - Koligudu web
Nati Koli FowlPox Treatment

ನಮಸ್ಕಾರ ಸ್ನೇಹಿತರೆ, ನಾನು ನಿಮ್ಮ ಸತೀಶ್ ರಾಜ್, ನಾಟಿ ಕೋಳಿ ಸಾಕಾಣಿಕೆ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ “ಕೋಳಿಗೂಡು” ವೆಬ್ಸೈಟ್ ಭೇಟಿ ನೀಡಿ, ಹಾಗೂ ಇನ್ನಷ್ಟು ಮಾಹಿತಿಗಳನ್ನು ಸುಲಭವಾಗಿ ಪಡೆಯೋಕೆ “ಕೋಳಿಗೂಡು ಆಪ್ ” ಡೌನ್ಲೋಡ್ ಮಾಡಿ ಕೊಳ್ಳಿ, ಹಾಗೆ ಕೋಳಿಗೂಡು youtube ಚಾನಲ್ ಅನ್ನ subscribe ಆಗೋಕೆ ಮಾತ್ರ ಮರೀಬೇಡಿ. ಮುಂದೆ ಬರೋ ಇನ್ನಷ್ಟು ಮಾಹಿತಿ ವಿಡಿಯೋಗಳನ್ನ ಮಿಸ್ ಮಾಡ್ಕೋ ಬೇಡಿ ಅಂತ ಹೇಳ್ತಾ… ಬನ್ನಿ ಈ ದಿನದ ವಿಷಯಕ್ಕೆ ಹೋಗೋಣ….

ಇದನ್ನೂ ಓದಿ : ನಾಟಿ ಕೋಳಿ ಮರಿಗಳಲ್ಲಿನ 5 ಸಾಮಾನ್ಯ ರೋಗಗಳು

ನಾಟಿ ಕೋಳಿಗೆ ಬರುವ ಫೌಲ್ ಪಾಕ್ಸ್ ಸಾಂಕ್ರಾಮಿಕ ವೈರಲ್ ಸೋಂಕಾಗಿದ್ದು, ಕೋಳಿಯ ಚರ್ಮದ ಮೇಲೆ ನೋವು ಕೊಡೋ ಹುಣ್ಣುಗಳನ್ನ ಸೃಷ್ಟಿ ಮಾಡುತ್ತೆ…

ಮೊದಲೇ ಹೇಳಿದಂತೆ, ಈ ಡ್ರೈ ಫೌಲ್ ಪಾಕ್ಸ್ ಕೋಳಿಗೆ ಎಲ್ಲಿ ಗರಿ ಇಲ್ಲವೋ ಅಲ್ಲಿ ಕೋಳಿ ಚರ್ಮದ ಮೇಲೆ ಪರಿಣಾಮ ಬೀರುತ್ತೆ, ಕೋಳಿಯ ಮುಖ, ಮೂಗು, ಕಣ್ಣುರೆಪ್ಪೆ, ಕುತ್ತಿಗೆ, ತಲೆ ಈಗೆ ಎಲ್ಲೆಡೆ ಹುಣ್ಣುಗಳನ್ನು ಸೃಷ್ಟಿ ಮಾಡುತ್ತೆ…

ಇನ್ನ ವೆಟ್ ಫೌಲ್ ಪಾಕ್ಸ್, ಗಂಟಲು, ಬಾಯಿ ಹಾಗೂ ಉಸಿರಾಟದ ಮೇಲೆ ಗಾಢವಾದ ಸಮಸ್ಯೆ ಬೀರುತ್ತೆ, ಮುಖ್ಯವಾಗಿ ಇದು ಜೀವಕ್ಕೆ ತುಂಬಾ ಅಪಾಯ ಮಾಡುತ್ತೆ.

ಇದೆ ಮಾಹಿತಿ ವೀಡಿಯೋ ಮೂಲಕ ತಿಳಿಯಲು, ಕೆಳಗಿನ ವೀಡಿಯೋ ನೋಡಿ, ಇಲ್ಲವೇ ಓದುವುದು ಮುಂದುವರೆಸಿ…

ಆಗಾದ್ರೆ ಈ ಫೌಲ್ ಪಾಕ್ಸ್ (FowlPox) ಬರೋಕೆ ಕಾರಣ ಏನು ? ಈ ಸಮಸ್ಯೆಗೆ ಕಾರಣ ಏನು ?

ಸ್ನೇಹಿತರೆ, ಇದಕ್ಕೆ ಮುಖ್ಯ ಕಾರಣ ಬಿಸಿ, ಹೆಚ್ಚಾದ ಶಾಖ… ಎರಡನೆಯದಾಗಿ ಕೀಟಗಳು, ವಿಶೇಷವಾಗಿ ಸೊಳ್ಳೆಗಳು ಕಚ್ಚೋದ್ರಿಂದ ಇದು ಇನ್ನಷ್ಟು ಕೋಳಿಗಳಿಗೆ ಹಬ್ಬುತ್ತೆ, ಕೊನೆಯದಾಗಿ ಬ್ಯಾಕ್ಟೀರಿಯಾ.

ಮೊದಲು ಒಂದೆರೆಡು ಕೋಳಿಗೆ ಕಾಣಿಸಿಕೊಳ್ಳೋ ಈ ಸಮಸ್ಯೆ ಸರಿಯಾದ ಆರೈಕೆ ಇಲ್ಲದೆ ಹೋದರೆ, ನಿಮ್ಮ ಪೂರ್ತಿ ಕೋಳಿ ಹಿಂಡಿಗೆ ಹಬ್ಬುತ್ತೆ, ಹೌದು ಸ್ನೇಹಿತರೆ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಮೊದಲು ಆ ಕೋಳಿಗಳನ್ನು ಇತರ ಕೋಳಿಗಳಿಂದ ಪ್ರತ್ಯೇಕಿಸಿ, ಬೇರ್ಪಡಿಸಿ… ಆ ನಂತರ ಚಿಕಿತ್ಸೆ ನೀಡಬೇಕು….

ಇದನ್ನೂ ಓದಿ : ಮಾಸಿಕ ನಾಟಿ ಕೋಳಿ ಆರೈಕೆ ಕ್ರಮಗಳು

ಒಮ್ಮೆ ಈ ಫೌಲ್ ಪಾಕ್ಸ್ ಕಾಣಿಸಿಕೊಂಡರೆ ತಿಂಗಳು ಗಟ್ಟಲೆ ನಿಮ್ಮ ಕೋಳಿಗಳನ್ನು ಬಾದಿಸುತ್ತೆ, ಸಾಮಾನ್ಯವಾಗಿ ಈ ಸಮಸ್ಯೆ ಬೇಸಿಗೆ ಕಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತೆ…

ಫೌಲ್ ಪಾಕ್ಸ್ (FowlPox) ಸಮಸ್ಯೆ ಬಂದಾಗ ಕೋಳಿಗೆ ಯಾವ ರೀತಿ ಪರಿಣಾಮ ಬೀರುತ್ತೆ ?

  1. ಕೋಳಿಗಳಿಗೆ ಈ ಹುಣ್ಣುಗಳು ಬಹಳಷ್ಟು ನೋವು ಉಂಟು ಮಾಡುತ್ತೆ..
  2. ಮೊಟ್ಟೆ ಇಡೋ ಕೋಳಿಗೆ ಈ ಸಮಸ್ಯೆ ಬಂದರೆ, ಮೊಟ್ಟೆಯಲ್ಲಿ ಕುಸಿತ ಕಾಣಬಹುದು… ಅಥವಾ ಮೊಟ್ಟೆ ಇಡದೆ ಇರಬಹುದು.
  3. ಹಾಗೆ ಕೋಳಿಗಳ ತೂಕ ನಷ್ಟ ಆಗಬಹುದು, ದಟ್ಟ ಪುಷ್ಟ ಆಗಿದ್ದ ಕೋಳಿ ಒಮ್ಮೆಲೇ ಸೊರಗಿ ಹೋಗಬಹುದು.
  4. ಆಹಾರದ ಮೇಲೆ ಆಸಕ್ತಿ ಕಳೆದು ಕೊಳ್ಳಬಹುದು.
  5. ಮಂಕಾಗಿ ಒಂದೆಡೆ ತೂಕಡಿಸಲು ಶುರುವಾಗುತ್ತವೆ….

ಈ ಫೌಲ್ ಪಾಕ್ಸ್ ಹರಡದಂತೆ ಯಾವ ಯಾವ ಮುನ್ನೆಚ್ಚರಿಕೆ ವಹಿಸಬೇಕು ?

  • ಸೊಳ್ಳೆಗಳನ್ನು ನಿಯಂತ್ರಿಸಿ,
  • ಕೋಳಿಗಳನ್ನು ಇರಿಸಿರುವ ಜಾಗದಲ್ಲಿ ಸಾಕಷ್ಟು ಗಾಳಿ ಬೆಳಕು ಇರೋ ತರ ನೋಡಿಕೊಳ್ಳಿ..
  • ಸ್ವಚ್ಛವಾದ ನೀರನ್ನೇ ನೀಡಿ…. ಹಾಗೂ ಸ್ವಚ್ಛತೆಯ ಬಗ್ಗೆ ಗಮನಕೊಡಿ..
  • ಕಡಿಮೆ ಜಾಗದಲ್ಲಿ ಹೆಚ್ಚು ಕೋಳಿಗಳನ್ನ ಸಾಕಬೇಡಿ…
  • ಹೊಸ ಕೋಳಿಗಳನ್ನು ತಂದಾಗ ಹಳೆಯ ಕೋಳಿಗಳ ಜೊತೆ ಬೆರೆಸುವ ಮೊದಲು ಸ್ವಲ್ಪ ದಿನ ಪ್ರತ್ಯೇಕವಾಗಿ ಇಡಿ..
ಬನ್ನಿ ಸ್ನೇಹಿತರೆ, ಈ ಫೌಲ್ ಪಾಕ್ಸ್ ಸಮಸ್ಯೆಗೆ ಚಿಕಿತ್ಸೆ ಹೇಗೆ ಮಾಡೋದು, ಎಂದು ನೋಡೋಣ..

ಮೊದಲು ಈ ಸಮಸ್ಯೆ ಇನ್ನಷ್ಟು ಗಾಢ ಆಗದೆ ಇರೋದಕ್ಕೆ ನಾವು ಯಾವುದಾದರೂ ಆಂಟಿಬಯೋಟಿಕ್ ನೀಡಬೇಕು, ಉದಾಹರಣೆ ಟೆಟ್ರಾಸೈಕ್ಲಿನ್ ಅಥವಾ ಲಿಕ್ಸಾನ್. ಕಾರಣ ಈ ಸಮಸ್ಯೆಯಿಂದ ಇನ್ನೊಂದು ಸಮಸ್ಯೆ ಸೃಷ್ಟಿ ಆಗದೆ ಇರಲಿ ಅಂತ.

ಮೂರು ದಿನಗಳು ಕೋಳಿಗೆ ನೀಡೋ ಕುಡಿಯುವ ನೀರಿನಲ್ಲಿ ಒಂದು ಕೋಳಿಗೆ ಒಂದು ಗ್ರಾಮ್ ನಂತೆ ಈ ಟೆಟ್ರಾಸೈಕ್ಲಿನ್ ಆಂಟಿ ಬಯೋಟಿಕ್ ನೀಡಬೇಕು. ಇದು Fowl Pox ಚಿಕಿತ್ಸೆಯ ಮೊದಲ ಕ್ರಮ…

ಇದನ್ನೂ ಓದಿ : ಕೋಳಿ ತನ್ನದೇ ಮೊಟ್ಟೆಗಳನ್ನು ಏಕೆ ತಿನ್ನುತ್ತದೆ ? ಅದನ್ನು ಹೇಗೆ ತಡೆಯುವುದು

ಎರಡನೆಯದಾಗಿ, ಈ ಫೌಲ್ ಪಾಕ್ಸ್ ಬಂದಿದೆ ಅಂದರೆ ಆ ಕೋಳಿಗೆ ಖಂಡಿತ ಜ್ವರದ ರೀತಿ ಮೈ ಸುಡಲು ಪ್ರಾರಂಭ ಆಗಿರುತ್ತದೆ, ಆ ಶಾಖ, ಅಥವಾ ಬಿಸಿ ಕಡಿಮೆ ಮಾಡಿಸೋಕೆ, ಒಂದು ಕಾಲು ಸ್ಪೂನ್ ಮೊಸರು ಅಥವಾ ಎಳನೀರು ಕುಡಿಸಬೇಕು, ಐದಾರು ದಿನ ಬೆಳಿಗ್ಗೆ ಮಧ್ಯಾಹ್ನ ಹಾಗೆ ಸಂಜೆ.

ಮೊಸರು ಕುಡಿಸೋದ್ರಿಂದ, ದೇಹ ಕೂಡ ತಂಪಾಗುತ್ತೆ, ಜೊತೆಗೆ ಈ ಮೊಸರಿನಲ್ಲಿ ಇರೋ ಒಳ್ಳೆಯ ಬ್ಯಾಕ್ಟೀರಿಯಾ ಕೆಟ್ಟ ಬ್ಯಾಕ್ಟೀರಿಯಾದ ಜೊತೆ ಹೋರಾಡುತ್ತೆ.

ಜೊತೆಗೆ ಬಿ ಕಾಂಪೆಕ್ಸ್ ಅರ್ಧ ಎಂಎಲ್ ದಿನಕ್ಕೆ ಎರಡು ಬಾರಿ ಕುಡಿಸ ಬೇಕು. ಇದೆಲ್ಲ ಕೋಳಿಯ ದೇಹದ ಒಳಬಾಗಕ್ಕೆ ನೀಡೋ ಚಿಕಿತ್ಸೆ.

ayurvedic treatment for fowlpox in Nati Koli - Koligudu
ayurvedic treatment for fowlpox

ಇನ್ನು ಈ ಸಮಸ್ಯೆಯಿಂದ ಆಗಿರೋ ಹುಣ್ಣುಗಳು, ಅಥವಾ ಗಾಯಕ್ಕೆ ಏನು ಮಾಡೋದು ?

ಹೌದು ಸ್ನೇಹಿತರೆ, ಈ ಗಾಯಗಳಿಗೆ ಸಹ ನಾವು ಚಿಕಿತ್ಸೆ ನೀಡಬೇಕು, ಇದಕ್ಕೆ ಹಲವು ಕ್ರಮ ಅನುಸರಿಸಬಹುದು, ಅವುಗಳಲ್ಲಿ ಉತ್ತಮ ಫಲಿತಾಂಶ ನೀಡೋ ಎರಡು ಕ್ರಮ ಇದೆ.

ಮೊದಲನೆಯದಾಗಿ, ಹಸುವಿನ ಹಸಿ ಹಾಲಿನ ಜೊತೆ ಹರಿಶಿನ, ಹರಿಶಿನ ಅಂದ್ರೆ ಅಂಗಡಿ ಹರಿಶಿನ ಅಲ್ಲ, ಹರಿಶಿಣದ ಕೊಂಬಿನಿಂದ ಮಾಡಿದ ಶುದ್ಧ ಹರಿಶಿನ ಬೆರಸಿ, ಗಾಯಗಳ ಮೇಲೆ ಬೆಳಿಗ್ಗೆ ಸಂಜೆ ಹಚ್ಚಬೇಕು.

ಅಥವಾ ಎರಡನೆಯದಾಗಿ, ಬೋರಿಕ್ ಆಸಿಡ್ ಪೌಡರ್ ಜೊತೆಗೆ ಕೊಬ್ಬರಿ ಎಣ್ಣೆ ಬೆರಸಿ ಸಹ ಲೇಪಿಸ ಬಹುದು, ದಿನಕ್ಕೆ ಎರಡು ಬಾರಿ……

ಇನ್ನು ಇದಕ್ಕೆ ಪರ್ಯಾಯವಾಗಿ ತುಜಾ ಕ್ರೀಮ್, ಸಾಯ್ ಬಾಲ್ ಕ್ರೀಮ್ ಗಳನ್ನೂ ಸಹ ಬಳಸಬಹುದು, ಆದರೆ ಇದರಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ… ಆದ್ದರಿಂದ ನೀವು ಹರಿಶಿನ ಹಾಲು, ಬೋರಿಕ್ ಆಸಿಡ್ ಕೊಬ್ಬರಿ ಎಣ್ಣೆ ಕ್ರಮ ಅನುಸರಿಸಿ.

ಸ್ನೇಹಿತರೆ, ಈ ಸಮಸ್ಯೆ ಆರೈಕೆಯಿಂದ ಮಾತ್ರ ಪರಿಹಾರ ಆಗುತ್ತೆ, ಇಲ್ಲದೆ ಹೋದ್ರೆ ಕೋಳಿಯ ಜೀವಕ್ಕೆ ತೊಂದ್ರೆ ಆಗುತ್ತೆ, ಆದ್ದರಿಂದ ತಪ್ಪದೆ ಆರೈಕೆ ಮಾಡಿ.

📱 ಕೋಳಿಗೂಡು ವೆಬ್ ನ ಎಲ್ಲಾ ಲೇಖನಗಳ ಅಲರ್ಟ್ಸ್ ಪಡೆಯಲು | Facebook | Twitter | Instagram | Youtube ಅನುಸರಿಸಿ.
📣 ಎಲ್ಲಾ ನವೀಕರಣಗಳು ಈಗ Koligudu App ನಲ್ಲಿ.